ಚೆಸ್ ಟೂರ್ನ್‌ಮೆಂಟ್‌ನಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆ ಮಕ್ಕಳ ಸಾಧನೆ Chess

ಚೆಸ್ ಟೂರ್ನ್‌ಮೆಂಟ್‌ನಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆ ಮಕ್ಕಳ ಸಾಧನೆ

ತೀರ್ಥಹಳ್ಳಿ : ಚಾಣಕ್ಯ ಟೆಸ್ ಸ್ಕೂಲ್ ಶಿವಮೊಗ್ಗ ಇವರು ಆಯೋಜಿಸಿದ ಅಂಡರ್ -1 ಬಾಲಕಿಯರ ಚೆಸ್‌
ಸ್ಪರ್ಧೆಯಲ್ಲಿ ಬೆಟ್ಟಮಕ್ಕಿಯ ಸಹ್ಯಾದ್ರಿ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿತ ಎ ಶೆಟ್ಟಿ, ಭಾಗವಹಿಸಿ ಪ್ರಥಮ ಸ್ಥಾನ ಹಾಗೂ 3 ನೇ ತರಗತಿಯ ವಿದ್ಯಾರ್ಥಿನಿ ವಿಧಾತ್ರಿ ಜೆ. ಅಂಡರ್ - 9 ಬಾಲಕಿಯರ ಚೆಸ್ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದಿರುತ್ತಾರೆ. 

ಇಬ್ಬರು ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಆಳಿತಾಧಿಕಾರಿ , ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.
Previous Post Next Post