ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ಕಣ್ಮರೆ - ಈಶ್ವರ್ ಮಲ್ಪೆಯಿಂದ ಶೋಧ ಕಾರ್ಯ Tunga river

ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ಕಣ್ಮರೆ - ಈಶ್ವರ್ ಮಲ್ಪೆಯಿಂದ ಶೋಧ ಕಾರ್ಯ

ತೀರ್ಥಹಳ್ಳಿ : ಮಂಗಳವಾರ ಸಂಜೆ ಸಮಯದಲ್ಲಿ ತುಂಗಾ ನದಿಯಲ್ಲಿ ಈಜಲು ಹೋಗಿ ಕಣ್ಮರೆಯಾಗಿದ್ದ ಯುವಕನಿಗಾಗಿ  ಶೋಧ ಕಾರ್ಯ ಮುಂದುವರೆದಿದೆ.ಪ್ರಸಿದ್ಧ ಈಜು ತಜ್ಞರಾದಂತಹ ಈಶ್ವರ ಮಲ್ಪೆ ತುಂಗಾ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಕಲ್ಲು ಬಂಡೆ ಮೇಲೆ ಮೊಬೈಲ್, ಚಪ್ಪಲಿ, ಬಟ್ಟೆಯನ್ನ ಇಟ್ಟು ಈಜಲು ಹೋಗಿದ್ದ ಯುವಕ ಕಣ್ಮರೆ ಆಗಿದ್ದ. ಮಾಹಿತಿಯ ಪ್ರಕಾರ ಬಸವರಾಜ್ 29 ವರ್ಷ ರಾಯಚೂರು ಮೂಲದ ಯುವಕ ಕಣ್ಮರೆ ಆಗಿರುವುದು ಎಂದು ತಿಳಿದುಬಂದಿದೆ.
ನಿನ್ನೆ ಸಂಜೆ ಅಗ್ನಿಶಾಮಕದಳ ಹಾಗೂ ಸ್ಥಳೀಯ ಈಜುಗಾರ ಪ್ರಮೋದ್ ಪೂಜಾರಿ ಅವರು ಹುಡುಕಾಟ ನಡೆಸಿದ್ದರು. 

ಸರಿ ಸುಮಾರು ಒಂದು ಗಂಟೆಗಳ ಕಾಲ ಹುಡುಕಿದರೂ ಸಹ ಯುವಕನ ಪತ್ತೆಯಾಗಿರಲಿಲ್ಲ. ಈಗ ಬೆಳ್ಳಂ ಬೆಳಗ್ಗೆ ಈಶ್ವರ್ ಮಲ್ಪೆ ಮತ್ತು ತಂಡದವರು ತುಂಗಾ ನದಿಯಲ್ಲಿ ಹುಡುಕಾಟವನ್ನು ನಡೆಸುತ್ತಿದ್ದು ಯುವಕನಿಗಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ ಸೊಪ್ಪು ಗುಡ್ಡೆ ರಾಘವೇಂದ್ರ, ಪ್ರಮೋದ್ ಪೂಜಾರಿ, ಪವನ್ ಮೊಗವೀರ ಸೇರಿದಂತೆ ಹಲವರು ಇದ್ದಾರೆ...




Previous Post Next Post