ಹೊನ್ನೇತಾಳು ಸರ್ಕಾರಿ ಶಾಲೆಯ ಮಕ್ಕಳಿಗೆ ಅಗ್ನಿಶಾಮಕದಳದಿಂದ ಪ್ರಾತ್ಯಕ್ಷಿತೆ
ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಶಿಕ್ಷಕರೊಬ್ಬರ ಬೀಳ್ಕೊಡುಗೆ ಸಮಾರಂಭ
ತೀರ್ಥಹಳ್ಳಿ : ಸರ್ಕಾರಿ ಶಾಲೆಯನ್ನು ಯಾವುದೇ ಖಾಸಗಿ ಶಾಲೆಯನ್ನು ಮೀರಿಸುವಂತೆ ಮಾಡುವ ಮೂಲಕ ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯಿಂದ ತೀರ್ಥಹಳ್ಳಿ ತಾಲೂಕಿನ ಮಾದರಿ ಶಾಲೆ ಎಂಬ ಬಿರುದು ಪಡೆದಿರುವ ಆಗುಂಬೆ ಸಮೀಪದ ಹೊನ್ನೇತಾಳು ಸರ್ಕಾರಿ ಶಾಲೆಯಲ್ಲಿ ಅಭಿವರ್ಧನ ಶಿಬಿರ ಕಾರ್ಯಕ್ರಮ ಪ್ರಯುಕ್ತ ಅಗ್ನಿಶಾಮಕದಳದಿಂದ ಪ್ರಾತ್ಯಕ್ಷಿತೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ನಿವೃತ್ತ ಸೈನಿಕರು ಹಾಗೂ ಅರಿವು ಕ್ಲಿನಿಕ್ ವೈದ್ಯರಾದ ಡಾ. ಅಭಿಜಾತ್ ಅವರು ಮಕ್ಕಳಿಗೆ ಭಾರತೀಯ ಸೈನ್ಯದ ಬಗ್ಗೆ ಮಾಹಿತಿ ನೀಡಿದರು. ದೇಶ ಸೇವೆಯನ್ನು ನಾವೆಲ್ಲರೂ ಮಾಡಬೇಕು. ಈಗ ಅಗ್ನಿವೀರ್ ಮೂಲಕ ಭಾರತೀಯ ಸೇನೆಗೆ ಸೇರುವ ಅವಕಾಶ ಎಲ್ಲರಿಗೂ ಇದೆ. ಅದನ್ನು ಸದುಪಯೋಗ ಮಾಡಿಕೊಂಡು ದೇಶಸೇವೆ ಮಾಡಬೇಕು. ಪೋಷಕರು ಸಹ ಇದನ್ನು ಮಕ್ಕಳಿಗೆ ತಿಳಿಸಬೇಕು ಹಾಗೆ ಇನ್ನು ಮಕ್ಕಳಿಗೆ ತಾವು ವೈದ್ಯರು ಸಹ ಆಗಿರುವ ಕಾರಣ ತಿಂಡಿ ತಿನಿಸುಗಳ ಬಗ್ಗೆ ಮಾಹಿತಿ ನೀಡಿದರು. ಹೊರಗಡೆ ಮಾಡುವ ತಿಂಡಿ ತಿನಿಸುಗಳನ್ನು ತಿಂದರೆ ಅದರಿಂದ ಆಗುವ ದುಷ್ಪರಿಣಾಮದ ಬಗ್ಗೆ ಹಾಗೂ ನಾವು ಏನೆಲ್ಲಾ ತಿನ್ನಬೇಕು, ಆರೋಗ್ಯ ಎಷ್ಟು ಮುಖ್ಯ ಎಂಬುದರ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಆ ನಂತರ ತೀರ್ಥಹಳ್ಳಿ ಅಗ್ನಿಶಾಮಕದಳದ ಸಿಬ್ಬಂದಿಗಳು ಮಕ್ಕಳಿಗೆ ಅಗ್ನಿ ದುರಂತದ ಬಗ್ಗೆ ಪ್ರಾತ್ಯಕ್ಷಿತೆ ಮಾಡಿ ತೋರಿಸಿದರು.. ಅದಕ್ಕೂ ಮೊದಲು ಅಗ್ನಿಶಾಮಕದಳದ ರಾಘವೇಂದ್ರ ಅವರು ಮಾತನಾಡಿ ಪೋಷಕರು ಮಕ್ಕಳನ್ನು ರಜೆಯ ಸಂದರ್ಭದಲ್ಲಿ ಹೇಗೆ ನೋಡಿಕೊಳ್ಳಬೇಕು, ಅದರಲ್ಲೂ ನದಿ, ಕೆರೆ, ಹಳ್ಳ ಕೊಳ್ಳ ಇರುವ ಕಡೆ ಜಾಗ್ರತೆ ವಹಿಸಬೇಕು, ಮತ್ತು ಮನೆಯಲ್ಲಿ ಅಗ್ನಿ ಅವಘಡ ಆದಾಗ ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.. ಆ ನಂತರ ಮಕ್ಕಳು ಅಗ್ನಿಶಾಮಕದಳದ ವಾಹನದ ನೀರಿನಲ್ಲಿ ಆಟವನ್ನು ಆಡುವ ಮೂಲಕ ಸಂಭ್ರಮಿಸಿದರು..
ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಶಿಕ್ಷಕರೊಬ್ಬರ ಬೀಳ್ಕೊಡುಗೆ ಸಮಾರಂಭ
ಹೊನ್ನೇತಾಳು ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸಿ ಪುಟಾಣಿ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡಿದ್ದ ಶಿಕ್ಷಕಿ ಸ್ನೇಹ ಅವರು ಕಾರಣಾಂತರಗಳಿಂದ ಶಾಲೆಯಿಂದ ತಮ್ಮ ಕರ್ತವ್ಯ ಮುಗಿಸುತ್ತಿದ್ದು ಅವರನ್ನು ಗೌರವದಿಂದ ಶಾಲೆಯಿಂದ ಬೀಳ್ಕೊಡಲಾಯಿತು. ಅದರಲ್ಲೂ ಅವರ ಜನ್ಮದಿನ ಸಹ ಆಗಿದ್ದು ಈ ಬೀಳ್ಕೊಡುಗೆ ಸಮಾರಂಭ ಪ್ರತಿಯೊಬ್ಬರ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು..
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಿತ್ಯಾನಂದ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಪುಲಸಿಂಗ ಲಮಾಣಿ , ಸಿಬ್ಬಂದಿಗಳಾದ
ರಾಘವೇಂದ್ರ, ಪ್ರಶಾಂತ್ ಕುಮಾರ್, ಶರತ್ ಎಂ
ಶಿವಕುಮಾರ ನಾವಿ , ಆದರ್ಶ ಎಸ್.ಕೆ, ನಿಂಗಪ್ಪ ಇಟ್ಟಣ್ಣವರ್ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಶಿಲ್ಪ, ಸಹ ಶಿಕ್ಷಕರಾದ ನವ್ಯ, ಪ್ರಿಯಾಂಕಾ ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು..
Tags:
ಆಗುಂಬೆ ಸುದ್ದಿ