ಶ್ರೀ ರಾಮೇಶ್ವರ ಮಹಿಳಾ ಯಕ್ಷಗಾನ ಮಂಡಳಿ ವತಿಯಿಂದ ಶ್ರೀ ರಾಮೇಶ್ವರ ಸಭಾಭವನದಲ್ಲಿ ಇಂದಿನಿಂದ ಯಕ್ಷಗಾನ ತರಗತಿ ಪ್ರಾರಂಭ Yakshagana

ಶ್ರೀ ರಾಮೇಶ್ವರ ಮಹಿಳಾ ಯಕ್ಷಗಾನ ಮಂಡಳಿ ವತಿಯಿಂದ ಶ್ರೀ ರಾಮೇಶ್ವರ ಸಭಾಭವನದಲ್ಲಿ ಇಂದಿನಿಂದ ಯಕ್ಷಗಾನ ತರಗತಿ ಪ್ರಾರಂಭ 

ತೀರ್ಥಹಳ್ಳಿ: ಕರಾವಳಿ ಕಲೆ ಎಂದೇ ಖ್ಯಾತಿಯನ್ನು ಪಡೆದಿರುವ ಯಕ್ಷಗಾನ ಕಲೆಯನ್ನು ಉಳಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಶ್ರೀ ರಾಮೇಶ್ವರ ಮಹಿಳಾ ಯಕ್ಷಗಾನ ಮಂಡಳಿ ವತಿಯಿಂದ ಸುಪ್ರಸಿದ್ಧ ಯಕ್ಷಗಾನ ಗುರುಗಳಾದ ಮುದ್ರಾಡಿ ಸುಬ್ರಹ್ಮಣ್ಯ ಪ್ರಸಾದ್‌ರವರ ನೇತೃತ್ವದಲ್ಲಿ ಶ್ರೀ ರಾಮೇಶ್ವರ ಸಭಾಭವನದಲ್ಲಿ ಇದೇ ಫೆ.28ರ ಶನಿವಾರದಂದು ಸಂಜೆ 4.30 ಯಕ್ಷಗಾನ ತರಗತಿಯನ್ನು  ಉದ್ಘಾಟಿಸಿ ಪ್ರಾರಂಭ ಮಾಡಲಿದ್ದಾರೆ. 7 ವರ್ಷ ಮೇಲ್ಪಟ್ಟ 45 ವರ್ಷ ಒಳಗಿನ ಮಕ್ಕಳು, ಮಹಿಳೆಯರು ಪುರುಷರು ಸೇರಲು ಅವಕಾಶವಿದ್ದು ಯಕ್ಷಗಾನ ಕಲಾಸಕ್ತರು ಹೆಸರನ್ನು ನೋಂದಾಯಿಸುವಂತೆ  ಸೂಚಿಸಲಾಗಿದೆ.

ಯಕ್ಷಗಾನದ ದಕ್ಷ ಗುರುಗಳಾದ ಮುದ್ರಾಡಿ ಸುಬ್ರಹ್ಮಣ್ಯ ಪ್ರಸಾದ್‌ರವರು ಕಳೆದ ನಾಲ್ಕೈದು ವರ್ಷಗಳಿಂದ ಯಶಸ್ವಿಯಾಗಿ ಯಕ್ಷಗಾನ ತರಗತಿಯನ್ನು ತೀರ್ಥಹಳ್ಳಿಯಲ್ಲಿ ನಡೆಸಿಕೊಂಡು ಬಂದಿದ್ದು ತಾಲೂಕಿನ ಅನೇಕ ಕಡೆಗಳಲ್ಲಿ ತಮ್ಮ ಶಿಷ್ಯರನ್ನು ರಂಗ ಪ್ರವೇಶ ಮಾಡಿಸಿ ಯಶಸ್ವಿ ಪ್ರದರ್ಶನವನ್ನು ನೀಡಿರುತ್ತಾರೆ. ಕಾರಣಾಂತರದಿಂದ ಒಂದು ವರ್ಷದಿಂದ ತರಗತಿಯನ್ನು ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಮತ್ತೆ ತೀರ್ಥಹಳ್ಳಿಯಲ್ಲಿ ಯಕ್ಷಗಾನ ತರಗತಿಯನ್ನು ಮಾಡಲು ನಿರ್ಧರಿಸಿದ್ದು ಇದೇ ಶನಿವಾರ ಶ್ರೀ ರಾಮೇಶ್ವರ ಸಭಾಭವನದಲ್ಲಿ ಯಕ್ಷಗಾನ ತರಗತಿಯ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಯಕ್ಷಗಾನ ಕಲಾಸಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಯೋಜಕರು ವಿನಂತಿದ್ದಾರೆ.






Previous Post Next Post