ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಡಿ ಮಂಜುನಾಥ್ ಆರೋಗ್ಯದಲ್ಲಿ ಏರುಪೇರು
ಕನಿಷ್ಠ ಮಾನವೀಯತೆ ತೋರಿಸಲಿಲ್ವ ಶಾಸಕ ಆರಗ ಜ್ಞಾನೇಂದ್ರ..!?
ತೀರ್ಥಹಳ್ಳಿ: ತಾಲೂಕು ಕಚೇರಿ ಎದುರು ಕೈಗಾರಿಕಾ ಕಾರ್ಖಾನೆ ಘಟಕಗಳ ಸ್ಥಾಪನೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಕಾರ್ಮಿಕ ಸಹಕಾರ ಸಂಘದ ಅಧ್ಯಕ್ಷ ಡಿ ಮಂಜುನಾಥ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ತಕ್ಷಣವೇ ಅವರನ್ನು ಜೆಸಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ಬೆಳಗ್ಗೆಯಿಂದ ಧರಣಿ ನಡೆಸುತ್ತಿದ್ದ ಮಂಜುನಾಥ್,
ಸ್ಥಳಕ್ಕೆ ಸಂಸದ ಬಿ ವೈ ರಾಘವೇಂದ್ರ ಬರಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ನನ್ನ ಜೀವ ಹೋದರು ಪರವಾಗಿಲ್ಲ, ಎಂಬ ಹೇಳಿಕೆ ನೀಡಿದ್ದರು. ಈಗ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕನಿಷ್ಠ ಮಾನವೀಯತೆ ತೋರಿಸಲಿಲ್ವ ಶಾಸಕ ಆರಗ ಜ್ಞಾನೇಂದ್ರ..!?
ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಮಾಹಿತಿ ಇತ್ತು. ತಾಲೂಕು ಪಂಚಾಯತ್ ನ ಸಭೆಯಲ್ಲಿ ಭಾಗಿಯಾಗಿದ್ದ ಶಾಸಕರು ಕನಿಷ್ಠ ಮಾನವೀಯತೆಗಾದರು ಪ್ರತಿಭಟನಾಕಾರರ ಬಳಿ ಬಂದು ಮಾತನಾಡಬಹುದಿತ್ತು. ಕಾರ್ಖಾನೆ ವಿಚಾರ ಬದಿಗಿಟ್ಟು ಉಪವಾಸ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದ ಮೇಲೆ ಮಾತನಾಡಿಸುವ ಪ್ರಯತ್ನ ಮಾಡಬಹುದಿತ್ತು. ಆದರೆ ಈ ವಿಚಾರದಲ್ಲಿ ಮಾನವೀಯತೆ ತೋರಿಸಲಿಲ್ವಾ? ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಕಾರ್ಮಿಕರ ಹಿತ ದೃಷ್ಟಿಯಿಂದ ನಡೆಯುತ್ತಿರುವ ಈ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ಈಗ ಆಸ್ಪತ್ರೆ ಮೆಟ್ಟಿಲು ಏರಿದ್ದು ಇನ್ನು ಏನಾಗುತ್ತೋ ಕಾದು ನೋಡಬೇಕಿದೆ.
Tags:
ತೀರ್ಥಹಳ್ಳಿ ಸುದ್ದಿ