ತೀರ್ಥಹಳ್ಳಿಯಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲುಆಗ್ರಹಿಸಿ ಉಪವಾಸ ಸತ್ಯಾಗ್ರಹ..! protest

ತೀರ್ಥಹಳ್ಳಿಯಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು
ಆಗ್ರಹಿಸಿ ಉಪವಾಸ ಸತ್ಯಾಗ್ರಹ..!

ಪ್ರತಿಭಟನೆಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಎಚ್ಚರಿಕೆ - ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ

ತೀರ್ಥಹಳ್ಳಿ : ತಾಲ್ಲೂಕಿನಲ್ಲಿ ಇಲ್ಲಿಯವರೆಗೂ ಸರ್ಕಾರ, ತಾಲ್ಲೂಕು ಹಾಗೂ ಜಿಲ್ಲೆಯ.ಜನಪ್ರತಿನಿಧಿಗಳು ತೀರ್ಥಹಳ್ಳಿ ತಾಲ್ಲೂಕಿಗೆ ಕಾರ್ಖಾನೆ ಘಟಕಗಳನ್ನು ಸ್ಥಾಪಿಸಲು, ತಾಲ್ಲೂಕಿನ ನಿರುದ್ಯೋಗಿ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸಲು ವಿಫಲರಾಗಿದ್ದು, ನಮ್ಮ ತಾಲ್ಲೂಕಿನ ಬಗ್ಗೆ,
ತೋರಿರುವ ಮಲತಾಯಿ ಧೋರಣೆಯನ್ನು ಖಂಡಿಸಿ ಕಾರ್ಮಿಕ ಹಿತ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಡಿ. ಗೌಡ ಹಾಗೂ ಕಾರ್ಮಿಕರು ತೀರ್ಥಹಳ್ಳಿಯ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಬೇಡಿಕೆ ಈಡೇರುವವರೆಗೆ ದಿನಾಂಕ 21 01 2026 ಬುಧವಾರ ಬೆಳಿಗ್ಗೆ 11 ಗಂಟೆಯಿಂದ
ಉಪವಾಸ ಸತ್ಯಾಗ್ರಹದ ಮೂಲಕ ತಮ್ಮ ಅಕ್ರೋಶವನ್ನು ಹೊರಹಾಕಿದ್ದಾರೆ.

ತಾಲ್ಲೂಕಿನಲ್ಲಿ ಕೆಲಸವಿಲ್ಲದೇ ಕಷ್ಟಪಡುತ್ತಿರುವ ಕಾರ್ಮಿಕರು, ಪ್ರತಿವರ್ಷವೂ ತಾಲ್ಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಯುವಕ ಯುವತಿಯರು ಪಿಯುಸಿ, ಪದವಿ ಇತರ ಶಿಕ್ಷಣ ಮುಗಿಸುತ್ತಿದ್ದು ಕ್ಷೇತ್ರದಲ್ಲಿ ಕೆಲಸ ಇಲ್ಲದೆ ಅಲೆಯುವ ಪರಿಸ್ಥಿತಿ ಎದುರಾಗಿದೆ. ತಾಲ್ಲೂಕಿನಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವುದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಈ ನಿಟ್ಟಿನಲ್ಲಿ ಯಾರೂ ಇಲ್ಲಿಯವರೆಗೆ ಗಮನ ಹರಿಸಿಲ್ಲ. ತಾಲ್ಲೂಕಿನ ಕಾರ್ಮಿಕರು, ನಿರುದ್ಯೋಗಿಗಳಿಗೆ, ಸಂಘ ಸಂಸ್ಥೆಗಳು, ಸಾರ್ವಜನಿಕರು ಉಪವಾಸ ಸತ್ಯಾಗ್ರಹಕ್ಕೆ ತಮ್ಮ ಬೆಂಬಲ ನೀಡಬೇಕೆಂದು ತಾಲ್ಲೂಕಿನ ಕಾರ್ಮಿಕ ಹಿತ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಡಿ ಗೌಡ ಇವರು ಕೋರಿದ್ದಾರೆ.

ಈ ಸಂಬಂಧ ಯಡೂರು ಸುರೇಂದ್ರ ಮಾತನಾಡಿ ಸಾವಿರಾರು ಕಾರ್ಮಿಕರ ಮಕ್ಕಳು ಪದವಿವರೆಗೆ
ವಿದ್ಯಾರ್ಹತೆ ಹೊಂದಿದ್ದರೂ ಸೂಕ್ತ ಕೆಲಸವಿಲ್ಲದೇ ಪರದಾಡುವಂತಾಗಿದೆ. ಆದ್ದರಿಂದ ತೀರ್ಥಹಳ್ಳಿ
ತಾಲ್ಲೂಕಿನಲ್ಲಿ ಕೈಗಾರಿಕಾ ಘಟಕದ ಅವಶ್ಯಕತೆ ಇರುತ್ತದೆ. ಇದನ್ನೆಲ್ಲಾ ಮನಗಂಡು ಕಾರ್ಮಿಕರು ಒಗಟ್ಟು ಪ್ರದರ್ಶಿಸಿ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸಲು ಈ ಹೋರಾಟ ಅಗತ್ಯವಾಗಿದೆ ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದು
ಸರ್ಕಾರ ಸ್ಪಂದಿಸದೆ ಇದ್ದಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
Previous Post Next Post