ಸರ್ಕಾರಿ ಶಾಲೆಯಲ್ಲೊಬ್ಬ ಬುಸುಗುಟ್ಟುವ ಮಾಸ್ಟರ್!?
ತೀರ್ಥಹಳ್ಳಿ : ಶಾಲೆಯಲ್ಲಿ ಮಕ್ಕಳಿಗೆ ಮಾತ್ರ ಪಾಠ ಮಾಡಬೇಕು ಎಂಬ ಕಾನೂನು ಇದೆ ಎಂಬುದು ಸರ್ಕಾರ ಮಾಡಿದೆಯೋ ಇಲ್ಲವೋ ತಿಳಿದಿಲ್ಲ ಆದರೆ
ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು ಅದನ್ನು ತೀರ್ಮಾನ ಮಾಡಿ ಬೇರೆ ಯಾವುದೇ ಕೆಲಸ ಬಂದರೂ ಮಾಡುವುದಿಲ್ಲ ಎಂಬ ಬೇಜವಾಬ್ದಾರಿ ವರ್ತನೆ ತೋರುತ್ತಾರೆ.
ಹೌದು ತೀರ್ಥಹಳ್ಳಿಯ ಸರ್ಕಾರಿ ಶಾಲೆಯಲ್ಲಿ
ಓದಿದ ಕಾರಣ ಸರ್ಕಾರಿ ಸೌಲಭ್ಯಗಳ ಸಂಬಂಧಿಸಿದ ಕೆಲಸಕ್ಕಾಗಿ ಅತ್ಯಂತ ಅವಶ್ಯಕತೆ ಇದ್ದ ಕಾರಣದಿಂದ ಸರ್ಕಾರಿ ಶಾಲೆಗೆ ಸಾರ್ವಜನಿಕರೊಬ್ಬರು ತೆರಳಿದ್ದಾರೆ. ಆದರೆ ಶಾಲೆ ಬಿಟ್ಟು 15 ನಿಮಿಷ ಆಗಿದ್ದಕ್ಕೆ ಈಗ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಇನ್ನು ಸ್ವಲ್ಪ ಹೊತ್ತು ಬಿಟ್ಟು ಬರಬೇಕಿತ್ತು ಎಂದು ಉಡಾಫೆ ಉತ್ತರ ಹೇಳುವ ಮೂಲಕ ಯಾಕೆ ಬಂದಿದ್ದು ಎಂಬ ಶೈಲಿಯಲ್ಲಿ ಮಾತನಾಡಿದ್ದಾರೆ.
ಸರ್ಕಾರಿ ಕೆಲಸಕ್ಕಾಗಿ ಅತ್ಯಂತ ಅವಶ್ಯಕತೆ ಇದ್ದ ಕಾರಣದಿಂದ ಅಲ್ಲಿನ ಶಿಕ್ಷಕರನ್ನು ಕೇಳಿದರು ಬುಸುಗುಟ್ಟುವ ಮೂಲಕ ತನಗೆ ಮಾತ್ರ ಸಮಯ ಇರುವುದು ಎಂಬಂತೆ ವರ್ತಿಸಿದ್ದು ಇದರಿಂದ ಸಾರ್ವಜನಿಕರು, ಪೋಷಕರು ಬೇಸರಗೊಂಡಿದ್ದಾರೆ.
ಅಷ್ಟೇ ಅಲ್ಲದೆ ವ್ಯಾಸಂಗ ದೃಡೀಕರಣ ಪತ್ರ ಬೇಕೆಂದು ಮನವಿ ಪತ್ರ ಸಲ್ಲಿಸಲು ತಿಳಿಸಿದ್ದಾರೆ.
ಇದು ಯಾವಾಗ ಆರಂಭ ಆಯಿತು ಎಂಬುದು ತಿಳಿದಿಲ್ಲ. ಶಾಲೆಯಲ್ಲಿ ತನ್ನದೇ ಮಾತು ನಡೆಯಬೇಕು ಎಂಬ ದರ್ಪದಿಂದ ಹೀಗೆ ಮಾಡುವ ಕೆಲವು ಶಿಕ್ಷಕರಿಂದಲೇ ಶಿಕ್ಷಣ ಇಲಾಖೆಗೆ ಕಪ್ಪು ಚುಕ್ಕೆ ಬರುತ್ತಿದೆ. ಗೊತ್ತಿರುವ, ತಿಳಿದಿರುವ ವ್ಯಕ್ತಿಗಳ ಜೊತೆಗೆ ಹೀಗೆ ದರ್ಪ ಮಾಡಿದರೆ ಏನು ತಿಳಿಯದ ಕೆಲವು ವ್ಯಕ್ತಿಗಳ ಕಥೆ ಏನು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
%20(4)%20(8).jpg)