ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆ ಫೋಟೊಗ್ರಾಫರ್ ಶಿವಮೊಗ್ಗ ನಂದನ್ ಇನ್ನಿಲ್ಲ ! Nandan

 ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆ ಫೋಟೊಗ್ರಾಫರ್ ಶಿವಮೊಗ್ಗ ನಂದನ್ ಇನ್ನಿಲ್ಲ !



ಶಿವಮೊಗ್ಗ ; ಖ್ಯಾತ ಛಾಯಾಗ್ರಾಹಕ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯ ಫೋಟೊಗ್ರಾಫರ್ ಶಿವಮೊಗ್ಗ ನಂದನ್ (57) ಹೃದಯಾಘಾತದಿಂದ ನಿಧನರಾಗಿದ್ದಾರೆ.


ಅನಾರೋಗ್ಯ ಹಿನ್ನೆಲೆ ಕಳೆದ ರಾತ್ರಿ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ‌.


ಶಿವಮೊಗ್ಗ ನಂದನ್ ಅವರ ಪಾರ್ಥೀವ ಶರೀರವನ್ನು ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪ (ಬ್ಲಡ್ ಬ್ಯಾಂಕ್ ಬಳಿ) ಇರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ‌.

Previous Post Next Post