ತೀರ್ಥಹಳ್ಳಿ ಡಿವೈಎಸ್ ಪಿ ವರ್ಗಾವಣೆ ಆದೇಶ! Dysp

 ತೀರ್ಥಹಳ್ಳಿ ಡಿವೈಎಸ್ ಪಿ ವರ್ಗಾವಣೆ ಆದೇಶ!


ತೀರ್ಥಹಳ್ಳಿ : ಡಿವೈಎಸ್ ಪಿ ಗಜಾನನ ವಾಮನ ಸುತಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಅದೇಶಿಸಿದೆ.

ತೀರ್ಥಹಳ್ಳಿಯಲ್ಲಿ ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದ ಡಿವೈಎಸ್ ಪಿ ಗಜಾನನ ವಾಮನ ಸುತಾರ ಅವರನ್ನು ಇಂದು ವರ್ಗಾವಣೆ ಮಾಡಲು ಸರ್ಕಾರ ಆದೇಶ ಮಾಡಿದ್ದು ಬಾಗಲಕೋಟೆಗೆ ವರ್ಗಾವಣೆ ಮಾಡಲಾಗಿದೆ.

ಎಳ್ಳಮಾವಾಸ್ಯೆ ಜಾತ್ರೆಯ ಯಶಸ್ಸಿಗೆ ಗಜಾನನ ವಾಮನ ಸುತಾರ ಅವರ ಕಾರ್ಯ ವೈಖರಿ ಕೂಡ ಪ್ರಮುಖ ಕಾರಣವಾಗಿತ್ತು. ಆದರೆ ಸರ್ಕಾರ ಏಕಾಏಕಿ ಇವರನ್ನು ವರ್ಗಾವಣೆ ಮಾಡಿದ್ದು ತೀರ್ಥಹಳ್ಳಿ ಜನತೆಗೆ ಬೇಸರ ಮೂಡಿಸಿದೆ.

ತೀರ್ಥಹಳ್ಳಿಯಲ್ಲಿ ಜನಪ್ರಿಯತೆ ಗಳಿಸಿದ್ದ ಗಜಾನನ ವಾಮನ ಸುತಾರ ಅವರ ಮುಂದಿನ ಕೆಲಸವು ಯಶಸ್ಸಿನಿಂದ ಕೂಡಿರಲಿ ಎಂದು ಶಿವಮೊಗ್ಗ ಸುದ್ದಿ ತಂಡ ಹಾರೈಸುತ್ತದೆ.



Previous Post Next Post