ತೀರ್ಥಹಳ್ಳಿಯಲ್ಲಿ ಹೋಟೆಲ್ ಉದ್ಯಮಿ ನೇಣಿಗೆ ಶರಣು!

 ತೀರ್ಥಹಳ್ಳಿಯಲ್ಲಿ ಹೋಟೆಲ್ ಉದ್ಯಮಿ ನೇಣಿಗೆ ಶರಣು!



ತೀರ್ಥಹಳ್ಳಿ: ಹೋಟೆಲ್ ಉದ್ಯಮಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ   ನಡೆದಿದೆ. 


ತೀರ್ಥಹಳ್ಳಿ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಬಳಿ ಹೋಟೆಲ್ ನಡೆಸುತ್ತಿದ್ದ ಬಾಳೇಬೈಲಿನ ಮಿಥುನ್ (34) ಇವರು ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ತಾಲೂಕಿನ ಹಂಡಿಗೆ ಮೂಲದ ಇವರು ಹೋಟೆಲ್ ಉದ್ಯಮವನ್ನು ಆರಂಭ ಮಾಡಿದ್ದರು. 


ಪತ್ನಿ ಮತ್ತು 8 ತಿಂಗಳ ಮಗು ಜತೆ ಬಾಳೆಬೈಲಿನಲ್ಲಿ ವಾಸವಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.


Previous Post Next Post