ರೈತರಿಗೆ ಆಗುವ ನಷ್ಟವನ್ನು ರಾಜ್ಯ ಸರ್ಕಾರ ತಕ್ಷಣ ತಪ್ಪಿಸಬೇಕು - ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ಕೇಂದ್ರ ಸರ್ಕಾರ ಭತ್ತದ ಬೆಂಬಲ ಬೆಳೆಯನ್ನ ಘೋಷಣೆ ಮಾಡಿದೆ. ಹಾಗೆ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ವಾಗ್ದಾನ ಮಾಡಿದೆ. ರಾಜ್ಯ ಸರ್ಕಾರ ಕೊಂಡುಕೊಳ್ಳುವ ಬಗ್ಗೆ ಪ್ರಾರಂಭ ಮಾಡಿಲ್ಲ. ಭತ್ತದ ಧಾರಣೆ ಮಾರುಕಟ್ಟೆಯ ಲ್ಲಿ ಸಿಕ್ಕಾಪಟ್ಟೆ ಬಿದ್ದು ಹೋಗಿದೆ ಭತ್ತವನ್ನು ಕೇಳುವವರೇ ಇಲ್ಲವಾಗಿದೆ. ರೈತರಿಗೆ ಆಗುವ ನಷ್ಟವನ್ನು ತಕ್ಷಣ ತಪ್ಪಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಅವರು ವಿಡಿಯೋ ಮೂಲಕ ಹೇಳಿಕೆ ನೀಡಿದ್ದು ಭತ್ತವನ್ನು ಕೊಂಡುಕೊಳ್ಳುವ ಪಾಯಿಂಟ್ ತೆರೆಯುವಂತೆ ಜಿಲ್ಲಾಧಿಕಾರಿಗಳ ಬಳಿ ಚರ್ಚೆ ಮಾಡಿದ್ದೇನೆ. ರಾಜ್ಯ ಸರ್ಕಾರ ಆದೇಶ ಮಾಡಿ ಹಣ ಕೊಡದೇ ಇದ್ದರೆ ಇದು ತೆರೆಯಲು ಆಗುವುದಿಲ್ಲ .ಭತ್ತ ಬೆಳೆಯುವವರೆ ಕಡಿಮೆ. ಭತ್ತ ಬೆಳೆದವರಿಗೆ ನಷ್ಟ ಆಗುತ್ತಿದೆ. ಅದನ್ನು ತಪ್ಪಿಸಬೇಕು ಎಂದಿದ್ದಾರೆ.
