ಶಿವಮೊಗ್ಗ ಜಿಲ್ಲಾ ಅಚಿವರ್ ಅವಾರ್ಡ್ ಪಡೆದ ವಾಗ್ದೇವಿಯ ಸಂಹಿತಾ ಉಡುಪ Vagdevi

ಶಿವಮೊಗ್ಗ ಜಿಲ್ಲಾ ಅಚಿವರ್ ಅವಾರ್ಡ್ ಪಡೆದ ವಾಗ್ದೇವಿಯ ಸಂಹಿತಾ ಉಡುಪ 

ತೀರ್ಥಹಳ್ಳಿ : ಅಂತಾರಾಷ್ಟ್ರೀಯ ಯೋಗದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಆಯುಷ್ ಇಲಾಖೆಯವರು ನಡೆಸಿದ 12 ನೇ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಸಂಹಿತಾ ಎನ್ ಉಡುಪ ಇವಳನ್ನು ಜಿಲ್ಲಾ ಅಚಿವರ್ ಎಂದು ಸನ್ಮಾನಿಸಲಾಯಿತು . 

ಇವಳು ಕಳೆದ ವರ್ಷದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಪ್ರದರ್ಶಿಸಿ ಚಿನ್ನದ ಪದಕವನ್ನು ಗೆದ್ದಿದ್ದಳು.. ಈಗ ಅಂತಾರಾಷ್ಟ್ರೀಯ ಯೋಗದಿನಾಚರಣೆ ದಿನವೇ ಜಿಲ್ಲಾ ಅಚಿವರ್ ಅವಾರ್ಡ್ ಪಡೆದಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ..
ಸಂಹಿತಾ ನಟೇಶ್ ಹಾಗೂ ಶ್ರೀಪಾದ ದಂಪತಿಗಳ ಪುತ್ರಿಯಾಗಿದ್ದು ಕುರುವಳ್ಳಿಯ ನಿವಾಸಿಯಾಗಿದ್ದಾಳೆ..
Previous Post Next Post