ತಳುವೆ ಬಳಿ ಅಪಘಾತ - ವ್ಯಕ್ತಿಯೋರ್ವನ ಕಾಲು ಕಟ್..!
ತೀರ್ಥಹಳ್ಳಿ : ವ್ಯಕ್ತಿಯೊರ್ವ ಏಕಾಏಕಿ ರಸ್ತೆಗೆ ಬಂದ ಕಾರಣ ಲಾರಿಯ ಚಕ್ರಕ್ಕೆ ಸಿಲುಕಿ ಎರಡು ಕಾಲು ಕಟ್ ಆಗಿರುವ ಘಟನೆ ತಳುವೆ ಸಮೀಪ ಬುಧವಾರ ಸಂಜೆ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ತಳುವೆ ಬಳಿ ಮೇಲಿನಕುರುವಳ್ಳಿಯ ಲಾರಿಯ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಕಾಲು ಕಟ್ ಆಗಿದೆ. ಆದರೆ ಈ ಅಪಘಾತಕ್ಕೆ ಆ ವ್ಯಕ್ತಿಯೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ನಿನ್ನೆ ಬೆಳಗ್ಗೆಯಿಂದ ಬಸ್ ಹಾಗೂ ಕಾರುಗಳಿಗೆ ಅಡ್ಡ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಮಧ್ಯಾಹ್ನ ಖಾಸಗಿ ಬಸ್ ವೊಂದಕ್ಕೆ ಅಡ್ಡ ಹೋಗಿದ್ದಾನೆ ಬಸ್ ನಿಧಾನವಾಗಿ ಬರುತ್ತಿದ್ದ ಕಾರಣ ಬ್ರೇಕ್ ಹಾಕಲಾಗಿದೆ. ನಂತರ ಬಸ್ ಡ್ರೈವರ್ ಬೈದು ಹೋಗಿದ್ದರು ಎಂದು ತಿಳಿದುಬಂದಿದೆ.
ಆದರೂ ಸಂಜೆ ಲಾರಿ ಬರುತ್ತಿದ್ದದ್ದನ್ನು ನೋಡಿ ಏಕಾಏಕಿ ರಸ್ತೆಗೆ ಹಾರಿದ್ದಾನೆ. ಈ ವೇಳೆ ಲಾರಿ ಚಾಲಕ ಎಷ್ಟೇ ತಪ್ಪಿಸಿದರು ಲಾರಿ ಹಿಂದಿನ ಚಕ್ರಕ್ಕೆ ಸಿಲುಕಿ ಕಾಲು ಕಟ್ ಮಾಡಿಕೊಂಡಿದ್ದಾನೆ.
ಈ ಪ್ರಕರಣ ವಿಚಿತ್ರವಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ..
Tags:
ಅಪಘಾತ ಸುದ್ದಿ