ತೀರ್ಥಹಳ್ಳಿ ಅಂಗನವಾಡಿ ಕೇಂದ್ರ ಹಾಗೂ ಪ್ರಾಥಮಿಕ ಶಾಲೆಗಳಿಗೆ ಮಾತ್ರ ರಜೆ ಘೋಷಣೆ
ಮೊದಲಿನ ಆದೇಶ ತಿದ್ದುಪಡಿ ಮಾಡಿದ ತಹಸೀಲ್ದಾರ್..!
ತೀರ್ಥಹಳ್ಳಿ : ಇಂದು ತೀರ್ಥಹಳ್ಳಿ ತಾಲೂಕಿನಾದ್ಯಂತ ಅತಿ ಹೆಚ್ಚಿನ ಮಳೆ ಯಾಗುತ್ತಿರುವುದರಿಂದ ಹಾಗೂ ಹೆಚ್ಚಿನ ಮಳೆಯಾಗುವ ಸಂಭವನೀಯತೆ ಹೆಚ್ಚಿರುವುದರಿಂದ ದಿನಾಂಕ 25.07.2025 ರಂದು ಮಕ್ಕಳ ಹಿತದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳಿಗೆ ಮತ್ತು ಪ್ರಾಥಮಿಕ ಶಾಲೆಗಳಿಗೆ ಮಾತ್ರ ಅನ್ವಯಿಸಿ ರಜೆಯನ್ನು ಘೋಷಿಸಲಾಗಿದೆ,ಮುಂದಿನ ರಜಾ ದಿವಸಗಳಲ್ಲಿ ಶಾಲೆಗಳನ್ನು ನಡೆಯಿಸಿ ಪಾಠ ಪ್ರವಚನಗಳನ್ನು ಸರಿದೂಗಿಸಲು ಸೂಚಿಸಿದೆ..
ಹೈ ಸ್ಕೂಲ್ ಹಾಗೂ ಕಾಲೇಜುಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಇವರನ್ನು ಹೊರತುಪಡಿಸಿ ರಜೆಯನ್ನು ಘೋಷಿಸಲಾಗಿದೆ.
Tags:
ತೀರ್ಥಹಳ್ಳಿ ಸುದ್ದಿ