ಪುಷ್ಯ ಮಳೆಯ ಅಬ್ಬರ - ತೀರ್ಥಹಳ್ಳಿಯ ಶಾಲಾ ಕಾಲೇಜು ಗಳಿಗೆ ಇಂದು ರಜೆ ಘೋಷಣೆ thirthahalli

ಪುಷ್ಯ ಮಳೆಯ ಅಬ್ಬರ - ತೀರ್ಥಹಳ್ಳಿಯ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ
ತೀರ್ಥಹಳ್ಳಿ: ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ  ಮುಂಜಾಗೃತಾ ಕ್ರಮವಾಗಿ  ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ, ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ತಹಸೀಲ್ದಾರ್ ರಂಜಿತ್ ಆದೇಶ ಹೊರಡಿಸಿದ್ದಾರೆ.


ಕಳೆದ 24 ಗಂಟೆಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದ್ದು ಇದರಿಂದ ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆಯಾಗುವ ಮುನ್ಸೂಚನೆಯಿಂದ ರಜೆ ಘೋಷಿಸಲಾಗಿದೆ. ಈಗ ನೀಡಿರುವ ರಜೆಯನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲು ತಿಳಿಸಲಾಗಿದೆ.









Previous Post Next Post