ನದಿಯ ಮಧ್ಯದಲ್ಲಿ ಕೆಟ್ಟು ನಿಂತ ಲಾಂಚ್ - ತಪ್ಪಿದ ಅವಘಡ
ಸಾಗರ : ಶರಾವತಿ ಹಿನ್ನೀರು ಪ್ರದೇಶದ ಹೊಳೆಬಾಗಿಲು ನದಿಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಲಾಂಚ್ ನೀರಿನ ಮಧ್ಯದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ನಿಂತ ಘಟನೆ ಗುರುವಾರ ಸಂಜೆ ನಡೆದಿದೆ.
ಲಾಂಚಿನಲ್ಲಿ ಸರಿಸುಮಾರು ನೂರಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ವಾಹನಗಳನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಪ್ರಯಾಣಿಕರು ಕೆಲವು ತಾಸು ಆತಂಕಕ್ಕೆ ಒಳಗಾದ ಘಟನೆ ನಡೆಯಿತು.
ಸೇತುವೆ ಕಾಮಗಾರಿಯ ಡಿ ಬಿ ಲಾಂಚ್ ಮೂಲಕ ಹಗ್ಗ ಕಟ್ಟಿಕೊಂಡು ಕೆಟ್ಟು ನಿಂತಿದ್ದ ಲಾಂಚ್ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಡಿಬಿ ಲಾಂಚ್ ಹೋಗಲು ಸ್ವಲ್ಪ ತಡವಾಗಿದ್ದರು ಕೆಟ್ಟು ನಿಂತಿದ್ದ ಲಾಂಚ್ ಅಲ್ಲೇ ಇತ್ತೀಚಿಗೆ ನಿರ್ಮಾಣಗೊಳ್ಳುತ್ತಿರುವ ಸಿಗಂದೂರು ಬ್ರಿಡ್ಜ್ ಕಂಬಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು ಎಂದು ತಿಳಿದು ಹೇಳಲಾಗಿದೆ.
ಡಿಬಿ ಲಾಂಚ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಅನಾಹುತ ಒಂದು ತಪ್ಪಿದ್ದಂತಾಗಿದೆ.