ಮಳೆಯ ಅಬ್ಬರ - ತೀರ್ಥಹಳ್ಳಿಯ ಒಂದು ಶಾಲೆಗೆ ನಾಳೆ ರಜೆ ಘೋಷಣೆ Rain

ಮಳೆಯ ಅಬ್ಬರ - ತೀರ್ಥಹಳ್ಳಿಯ ಒಂದು ಶಾಲೆಗೆ ನಾಳೆ ರಜೆ ಘೋಷಣೆ

ತೀರ್ಥಹಳ್ಳಿ: ಆಗುಂಬೆ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನದಿ ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಹಳ್ಳಿ ಪ್ರದೇಶ ಗಳಿಂದ ಬರುವ ಮಕ್ಕಳಿಗೆ ತೊಂದರೆಯಾಗುವ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಹೊನ್ನೇತಾಳು ಸರ್ಕಾರಿ ಶಾಲೆಗೆ ಎಸ್ ಡಿ ಎಂ ಸಿ ಆದೇಶದ ಅನ್ವಯವಾಗಿ ರಜೆ ನೀಡಲಾಗಿದೆ.


ಕಳೆದ 24 ಗಂಟೆಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದ್ದು ಇದರಿಂದ ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆಯಾಗುವ ಮುನ್ಸೂಚನೆಯಿಂದ ರಜೆ ಘೋಷಿಸಲಾಗಿದೆ. ಈಗ ನೀಡಿರುವ ರಜೆಯನ್ನು ಮುಂದಿನ ಶನಿವಾರದಂದು ಸರಿಪಡಿಸಿಕೊಳ್ಳಲು ತಿಳಿಸಲಾಗಿದೆ.
Previous Post Next Post