ತೀರ್ಥಹಳ್ಳಿಯ ಯುವ ಪ್ರತಿಭೆಗಳನ್ನು ಗೌರವಿಸಿ ಸನ್ಮಾನಿಸಿದ ಪ. ಪಂ ಅಧ್ಯಕ್ಷ ಅಸಾದಿ
ಲೈವ್ ನಲ್ಲೆ ಅಸಾದಿಯ ಚಿತ್ರ ಬಿಡಿಸಿದ ಅಭಿಷೇಕ್
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಈ ಬಾರಿ ಅತೀ ಹೆಚ್ಚು ವೈರಲ್ ಆಗಿದ್ದು ತೀರ್ಥಹಳ್ಳಿಯ ಇಬ್ಬರು ಯುವ ಪ್ರತಿಭೆಗಳು. ರಾಮಕೊಂಡದಿಂದ ಪರಶುರಾಮ ಎದ್ದು ಬರುವ ರೀತಿಯಲ್ಲಿ ತಂತ್ರಜ್ಞಾನದ ಮೂಲಕ ಮಾಡಿದ್ದ ಕಾರ್ತಿಕ್ ಶ್ರೀಯಾನ್ ಹಾಗೂ ರಾಮಮಂಟಪದ ಬಳಿ ರಾಮಮಂಟಪದ ಚಿತ್ರ ಬಿಡಿಸಿದ್ದ ಅಭಿಷೇಕ್ ತೀರ್ಥಹಳ್ಳಿ ಇಬ್ಬರನ್ನು ಪ. ಪಂ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ಗೌರವಿಸಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಅಸಾದಿ ತೀರ್ಥಹಳ್ಳಿಯಲ್ಲಿ ಹಲವಾರು ಮಂದಿ ಕಲೆಗಾರರು ಇದ್ದಾರೆ. ಆದರೆ ಈ ಜಾತ್ರೆಯ ಮೆರಗನ್ನು ಹೆಚ್ಚಿಸಿ ಜನರ ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಇಬ್ಬರು ಯುವಕರು ಜಾತ್ರೆಯ ಯಶಸ್ಸಿಗೆ ಕಾರಣ ಕರ್ತರಾಗಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ರಾಮಮಂಟಪದ ಬಳಿ ಲೈವ್ ಅಲ್ಲಿ ಚಿತ್ರ ಬಿಡಿಸಿದ್ದ ಅಭಿಷೇಕ್ ಅವರು ಈಗಾಗಲೇ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಜನಮನ್ನಣೆ ಪಡೆದಿದ್ದಾರೆ. ಆದರೆ ತೀರ್ಥಹಳ್ಳಿಯಲ್ಲಿ ಇವರ ಕಲೆಯನ್ನು ಗುರುತಿಸಿದ್ದು ಶಿವಮೊಗ್ಗ ಸುದ್ದಿ ಎಂದರು.
ಇತ್ತೀಚಿಗೆ ನಾವೆಲ್ಲರೂ ಜಾಸ್ತಿ ಮೊಬೈಲ್ ಗೆ ಹೊಂದಿಕೊಂಡಿರುತ್ತೇವೆ. ಅದರಲ್ಲೂ ಸೋಶಿಯಲ್ ಮೀಡಿಯಾವನ್ನು ಜಾಸ್ತಿ ನೋಡುತ್ತೇವೆ. ಇಂತಹ ಕಲಾವಿದರನ್ನು ಗುರುತಿಸುವ ಮೂಲಕ ಈ ಬಾರಿಯ ಜಾತ್ರೆಯ ಸೊಭಗನ್ನು ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ ಇವರನ್ನು ವಯಕ್ತಿಕವಾಗಿ ಗೌರವಿಸುತ್ತಿದ್ದೇವೆ. ಅವರು ಮಂಗಳೂರಿಗೆ ತುರ್ತಾಗಿ ಹೋಗಬೇಕಾದ ಕಾರಣ ತುರ್ತಾಗಿ ಈ ಸನ್ಮಾನ ಇಟ್ಟುಕೊಂಡೆವು. ಇನ್ನೊಮ್ಮೆ ಪಟ್ಟಣ ಪಂಚಾಯತ್ ನ ಎಲ್ಲಾ ಸದಸ್ಯರ ಜೊತೆಗೆ ಸೇರಿ ಗೌರವಿಸುವ ಕೆಲಸ ಮಾಡುತ್ತೇವೆ ಎಂದರು.
ಇನ್ನೊಬ್ಬ ಕಲಾವಿದ ಕಾರ್ತಿಕ್ ಶ್ರೀಯಾನ್, ಇವರು ಛತ್ರಕೇರಿಯ ನಿವಾಸಿ, ತೀರ್ಥಹಳ್ಳಿ ಎಂದರೆ ರಾಮೇಶ್ವರನ ಕ್ಷೇತ್ರ, ತೀರ್ಥರಾಜಪುರ, ಪರಶುರಾಮನ ಕ್ಷೇತ್ರ ಎಂದು ಹೇಳುತ್ತೇವೆ. ನಾನು ಮುಸ್ಲಿಂ ಸಮುದಾಯದವನಾದರೂ ಹಿಂದೂ ಧರ್ಮದ ಬಗ್ಗೆ ತಿಳಿಯುವ ಆಸಕ್ತಿ ಹುಟ್ಟಿದಾಗ ಆತನ ತಾಯಿಯನ್ನ ಶಿರಶ್ಚೇಧನ ಮಾಡಿದ ನಂತರದಲ್ಲಿ ಪಶ್ಚಾತಾಪ ಪಟ್ಟು ಕೊಡಲಿಯಲ್ಲಿ ಇದ್ದಂತಹ ರಕ್ತವನ್ನು ತೊಳೆಯಲು ಇಡೀ ಪ್ರಪಂಚವನ್ನ ಸುತ್ತಿದಾಗ ಕೊಡಲಿಯಲ್ಲಿ ಇದ್ದಂತಹ ರಕ್ತ ಹೋಗಿರಲಿಲ್ಲ. ನಂತರ ತೀರ್ಥಹಳ್ಳಿಯ ತುಂಗಾ ನದಿಯ ರಾಮಕುಂಡದ ಬಳಿ ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಅಕಸ್ಮಾತ್ ಆಗಿ ಆ ಕೊಡಲಿ ನೀರಿಗೆ ಬಿದ್ದು ಆ ರಕ್ತದ ಕಲೆ ಮಾಯವಾಗಿತ್ತು. ಆನಂತರದಲ್ಲಿ ಪರುಶುರಾಮನು ಕೂಡ ತುಂಗಾ ನದಿಯ ಆಕೊಂಡದಲ್ಲಿ ಸ್ನಾನ ಮಾಡುವ ಮೂಲಕ ಪಾಪವನ್ನು ಪರಿಹಾರ ಮಾಡಿಕೊಂಡ ಆನಂತರದಲ್ಲಿ ರಾಮೇಶ್ವರನ ಪ್ರತಿಷ್ಠಾಪನೆಯನ್ನು ಕೂಡ ಪರಶುರಾಮ ಮಾಡಿದ ಎಂಬ ಇತಿಹಾಸದ ಕತೆಯನ್ನು ಕೇಳಿದ್ದೇವೆ.
ಆ ಇತಿಹಾಸದ ಆಧಾರದ ಮೇಲೆಯೇ ತೀರ್ಥಹಳ್ಳಿಯ ಜಾತ್ರೆ ನಡೆಯುತ್ತಿದೆ. ಕಾರ್ತಿಕ್ ಶ್ರೀಯಾನ್ ಎಂಬ ಯುವಕ ಇತ್ತೀಚಿನ ನೂತನ ತಂತ್ರಜ್ಞಾನದ ಮೂಲಕ ಅದು ವಿಡಿಯೋವನ್ನು ಕ್ರಿಯೇಟ್ ಮಾಡಲಾಗಿತ್ತು. ಆ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿ ಇದು ಆ ಕಾಲದ್ದೇ ವಿಡಿಯೋ ಎಂಬಂತೆ ಬೆಂಬಿತವಾಗಿತ್ತು. ಹಾಗಾಗಿ ಕಾರ್ತಿಕ್ರಿಯಾನ್ ಹಾಗೂ ಅಭಿಷೇಕ್ ತೀರ್ಥಹಳ್ಳಿ ಈ ಇಬ್ಬರನ್ನು ಕೂಡ ಪಟ್ಟಣ ಪಂಚಾಯಿತಿ ವತಿಯಿಂದ ಸನ್ಮಾನಿಸುತ್ತಿದ್ದೇವೆ. ಇವರಿಬ್ಬರೂ ಕೂಡ ತೀರ್ಥಹಳ್ಳಿಗೆ ಒಂದು ಹೆಮ್ಮೆ ಎಂದರು.
ಉಪಾಧ್ಯಕ್ಷರಾದ ಗೀತಾ ರಮೇಶ್ ಮಾತನಾಡಿ ಈಗಿನ ಯುವ ಜನಾಂಗದವರು ಕಲೆಯನ್ನು ಆರಾಧಿಸಿ ಕಂಡು ಬರುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ. ಕಲಾವಿದರು ಮೊದಲು ಕಲೆಯನ್ನ ಗೌರವಿಸಿ ನಂತರ ಇನ್ನೊಬ್ಬರು ಆ ಕಲೆಯನ್ನ ಗೌರವಿಸುವಂತೆ ಮಾಡಬೇಕು. ಅವರಿಬ್ಬರೂ ಮಾತನಾಡುವ ರೀತಿಯಲ್ಲಿ ನೋಡಿದರೆ ನಮಗೆಲ್ಲರಿಗೂ ಅರ್ಥವಾಗುತ್ತದೆ. ಅದನ್ನು ಅವರಿಬ್ಬರೂ ಸಹ ಅರ್ಥ ಮಾಡಿಕೊಂಡಿದ್ದಾರೆ ಎಂದರು.
ನೀವಿಬ್ಬರೂ ಸಹ ಇನ್ನು ಹೆಚ್ಚಿನ ಸಾಧನೆ ಮಾಡುವ ಮೂಲಕ ನಮ್ಮ ತೀರ್ಥಹಳ್ಳಿಗೆ ಇನ್ನಷ್ಟು ಹೆಮ್ಮೆಯ ತರುವಂತಹ ಕೆಲಸ ಮಾಡಿ ಎಂದು ಹಾರೈಸಿದರು. ಇಂತಹ ಕಲಾವಿದರನ್ನು ಎಲ್ಲರಿಗೂ ಪರಿಚಯಿಸಿದ ಶಿವಮೊಗ್ಗ ಸುದ್ದಿ ತಂಡಕ್ಕೆ ಧನ್ಯವಾದಗಳು. ಆ ಇಬ್ಬರು ಯುವಕರ ಭವಿಷ್ಯವನ್ನೇ ಬದಲಾವಣೆ ಮಾಡಿದ್ದೀರಿ, ಯಾಕೆಂದರೆ ಯಾರನ್ನೇ ಆಗಲಿ ಕುಗ್ಗಿಸುವ ಅಥವಾ ಬೆಳೆಸುವ ಶಕ್ತಿ ಮಾಧ್ಯಮದವರಿಂದ ಮಾತ್ರ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ಸುಶೀಲಾ ಶೆಟ್ಟಿ, ಮಂಜುಳಾ ನಾಗೇಂದ್ರ, ಡಾ. ಅನಿಲ್, ವಿಲಿಯಮ್ ಮಾರ್ಟಿಸ್, ಹಾಗೂ ಪಟ್ಟಣ ಪಂಚಾಯತ್ ನ ಎಲ್ಲಾ ಸಿಬ್ಬಂದಿಗಳು ಭಾಗಿಯಾಗಿದ್ದರು.
